Toggle Menu

ನಿನಗಾಗಿ

12:00 am - 12:00 am

ಹೆಸರಾಂತ ಸಿನಿಮಾ ನಟಿ ರಚನಾಗೆ ಬಣ್ಣದ ಬದುಕನ್ನು ತೊರೆದು ಸರಳ ಸಾಂಸಾರಿಕ ಜೀವನ ನಡೆಸುವ ಬಯಕೆ. ಮತ್ತೊಂದೆಡೆ ತನ್ನ ಆರು ವರ್ಷದ ಮಗಳು ಕೃಷ್ಣಾ ಜತೆ ಬದುಕುತ್ತಿರುವ ಫುಡ್ ಟ್ರಕ್ ಒಡೆಯ ಜೀವ ಇದ್ದಾನೆ. ಅಮ್ಮನ ಪ್ರೀತಿಗಾಗಿ ಹಂಬಲಿಸುವ ಪುಟ್ಟ ಕೃಷ್ಣಾ, ಜೀವಾ ಮತ್ತು ರಚನಾರನ್ನು ಹತ್ತಿರ ತರುತ್ತಾಳೆ. ಆದರೆ ರಚನಾಳನ್ನು ಬಂಗಾರದ ಮೊಟ್ಟೆಯಿಡುವ ಕೋಳಿಯೆಂದೇ ಭಾವಿಸಿರುವ ಅವಳ ತಾಯಿ ವಜ್ರೇಶ್ವರಿ ಈ ಮೂವರ ಕನಸುಗಳನ್ನು ನಿಜವಾಗಲು ಬಿಡುವಳೇ ಅನ್ನುವುದೇ ಈಗಿರುವ ಪ್ರಶ್ನೆ!