ಲಕ್ಷ್ಮಿ ಒಂದು ಸಾಧಾರಣ ಮನೆಯಿಂದ ಬಂದ ಬಡ ಹುಡುಗಿ. ವೈಷ್ಣವ್ ಒಬ್ಬ ರಾಕ್ ಸ್ಟಾರ್. ಅಜಗಜಾಂತರ ಇರುವ ಇವರಿಬ್ಬರ ಮದುವೆ ಆಗಿದ್ದಕ್ಕೆ ಕಾರಣ ವೈಷ್ಣವ್ ಅಮ್ಮನ ಲೆಕ್ಕಾಚಾರ. ಇದ್ಯಾವುದರ ಸುಳಿವಿಲ್ಲದ ಲಕ್ಷ್ಮಿ ತನ್ನ ಮುರಿದ ಸಂಸಾರವನ್ನು ಹೇಗೆ ಮತ್ತೆ ಕಟ್ಟಿಕೊಳ್ಳುತ್ತಾಳೆ? ಅತ್ತೆಯ ಮನಸನ್ನು ನೋಯಿಸದೆ ಗಂಡನ ಮನಸನ್ನು ತನ್ನತ್ತ ತಿರುಗಿಸಿಕೊಳ್ಳಲು ಅವಳಿಗೆ ಸಾಧ್ಯವಾಯಿತೆ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಹೇಳುತ್ತಾ ಸಾಗುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಸಂಚಿಕೆಗಳು ನಿಮ್ಮ ಮನ ಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ.