ಸವಿರುಚಿ

ಸವಿರುಚಿ

CK bot design

ಜನಪ್ರಿಯ ಕಾರ್ಯಕ್ರಮ ಸವಿರುಚಿಯ ಮೂರನೇ ಸೀಸನ್ ಒಂದು ಅಸಾಧಾರಣ ಪಾಕಪಯಣ. ಕರ್ನಾಟಕದ ವೈವಿಧ್ಯಮಯ ಹಾಗೂ ಶ್ರೀಮಂತ ತಿನಿಸು ನಕಾಶೆಯನ್ನು ಬೆನ್ನತ್ತಿ ನಿಮಗೆಲ್ಲ ರಾಜ್ಯದ ಮೂಲೆ ಮೂಲೆಯ ವಿಶಿಷ್ಟ ಅಡುಗೆಗಳ ರುಚಿ ತೋರಿಸುವ ಪ್ರಯತ್ನವಿದು. ಈ ಪಾಕಪಯಣದಲ್ಲಿ ನಮ್ಮನ್ನು ಸುತ್ತಾಡಿಸುವ ಹೊಣೆ ಹೊತ್ತಿರುವುದು ಪ್ರತಿಭಾನ್ವಿತ ನಿರೂಪಕಿ ಜಾಹ್ನವಿ. ಇಂಟರ್ ನೆಟ್ಟನ್ನು ಅಲ್ಲಾಡಿಸಿರುವ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಈ ಶೋನಲ್ಲಿ ಖಾಯಂ ಸೆಲೆಬ್ರೆಟಿ ಬಾಣಸಿಗನಾಗಿ ಜಾಹ್ನವಿಗೆ ಜೊತೆ ನೀಡಲಿದ್ದಾರೆ. ಅವರಿಬ್ಬರ ಜೊತೆಗೆ ಪ್ರತಿ ಸಂಚಿಕೆಯಲ್ಲೂ ಅತಿಥಿ ಬಾಣಸಿಗರೊಬ್ಬರು ನಿಮ್ಮನ್ನು ರಂಜಿಸಲಿದ್ದಾರೆ. ಇದಿಷ್ಟೇ ಅಲ್ಲ, ಆರೋಗ್ಯಕರ ಆಹಾರಾಭ್ಯಾಸವನ್ನು ಪ್ರೋತ್ಸಾಹಿಸಲೆಂದೇ ಒಂದು ವಿಶೇಷ ವಿಭಾಗವೂ ಈ ಶೋನಲ್ಲಿರುತ್ತದೆ. ‘ಆರೋಗ್ಯ ಅಡುಗೆ’ಯೆಂಬ ಈ ಭಾಗದಲ್ಲಿ ನುರಿತ ಆಹಾರ ತಜ್ಞರು ಪೋಷಕಾಂಶಭರಿತ ಅಡುಗೆ ತಯಾರಿಕೆ ಕುರಿತಂತೆ ತಮ್ಮ ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ. ಮನೆ ಅಡುಗೆ ಮಾತ್ರವಲ್ಲ, ಈ ಸೀಸನ್ನಿನ ಸವಿರುಚಿಯಲ್ಲಿ ಹೊರಗಿನ ಖಾದ್ಯಗಳಿಗೂ ಅಷ್ಟೇ ಜಾಗ ಮೀಸಲಿದೆ. ಅಜ್ಜಿ ಮಾಡುವ ಉಂಡೆಗಳಿಂದ ಹಳ್ಳಿ ತಿಂಡಿಯವರೆಗೆ ಹಾಗೂ ರುಚಿಕಟ್ಟಾದ ದೇವಸ್ಥಾನದ ಪ್ರಸಾದಗಳಿಂದ ಆಹಾರಬೀದಿಗಳ ಅನನ್ಯ ತಿನಿಸುಗಳವರೆಗೆ ಈ ಅಡುಗೆ ಕಾರ್ಯಕ್ರಮದ ವ್ಯಾಪ್ತಿ ಬಲು ದೊಡ್ಡದಿದೆ. ಹಾಗಾಗಿಯೇ, ಈ ಪಾಕಪಯಣ ನೋಡುಗರ ಬಾಯಲ್ಲಿ ನೀರೂರಿಸುವುದಷ್ಟೇ ಅಲ್ಲ, ಅವರ ಮನಸಲ್ಲಿ ಬೇರೂರುತ್ತದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಸೋಮ - ಶನಿ ಮಧ್ಯಾಹ್ನ 12

Cookery Show | U/A 7+

ಪಾತ್ರವರ್ಗ: ಜಾಹ್ನವಿ, ಕಬಾಬ್ ಖ್ಯಾತಿಯ ಚಂದ್ರು

Watch Now External site that opens in a new window

Playlist

Bottom Border Design
ಸವಿರುಚಿ ಸೀಸನ್ 3 | Savi Ruchi S3 | ಐಟಮ್ ವೆರೈಟಿ ವೆರೈಟಿ... ಸ್ಟೈಲು ಪಕ್ಕಾ ನಾಟಿ! ಹೊಸ ಗ್ಯಾಂಗ್, ಸವಿ ರುಚಿ!!

ಸವಿರುಚಿ ಸೀಸನ್ 3 | Savi Ruchi S3 | ಐಟಮ್ ವೆರೈಟಿ ವೆರೈಟಿ... ಸ್ಟೈಲು...

Savi Ruchi - Season 3 | ಐಟಮ್ ವೆರೈಟಿ ವೆರೈಟಿ... ಸ್ಟೈಲು ಪಕ್ಕಾ ನಾಟಿ!

Savi Ruchi - Season 3 | ಐಟಮ್ ವೆರೈಟಿ ವೆರೈಟಿ... ಸ್ಟೈಲು ಪಕ್ಕಾ ನಾಟಿ!

ಸವಿರುಚಿ ಸೀಸನ್ 3 |  Savi Ruchi :ನೀವು ಒಂದು ಸಲಕ್ಕೆ ಎಷ್ಟು ಎಳನೀರು ಕುಡಿಯುತ್ತೀರಾ?

ಸವಿರುಚಿ ಸೀಸನ್ 3 | Savi Ruchi :ನೀವು ಒಂದು ಸಲಕ್ಕೆ ಎಷ್ಟು ಎಳನೀರು ಕುಡಿಯುತ್ತೀರಾ?

ಸವಿರುಚಿ ಸೀಸನ್ 3 | Savi Ruchi : ಖುಷಿಯಿಂದ ಅಡುಗೆ ಮಾಡಿದ್ರೆ ರುಚಿ ಹೆಚ್ಚಾಗುತ್ತಂತೆ ಹೌದಾ?

ಸವಿರುಚಿ ಸೀಸನ್ 3 | Savi Ruchi : ಖುಷಿಯಿಂದ ಅಡುಗೆ ಮಾಡಿದ್ರೆ ರುಚಿ ಹೆಚ್ಚಾಗುತ್ತಂತೆ...

ಸವಿರುಚಿ ಸೀಸನ್ 3 | Savi Ruchi : ನೀವು ಪುದೀನಾ ಬೆಳ್ಳುಳ್ಳಿ ಕಬಾಬ್ ಯಾವಾಗ ಮಾಡ್ತಿದ್ದೀರಾ?

ಸವಿರುಚಿ ಸೀಸನ್ 3 | Savi Ruchi : ನೀವು ಪುದೀನಾ ಬೆಳ್ಳುಳ್ಳಿ ಕಬಾಬ್ ಯಾವಾಗ...

ಸವಿರುಚಿ ಸೀಸನ್ 3 | Savi Ruchi - ನಿಮಗೆ ಎಗ್ ರೈಸ್ ಸ್ಪೈಸಿಯಾಗಿ ಇರಬೇಕಾ? ಉಪ್ಪು- ಖಾರ ಸಮವಾಗಿ ಇರಬೇಕಾ?

ಸವಿರುಚಿ ಸೀಸನ್ 3 | Savi Ruchi - ನಿಮಗೆ ಎಗ್ ರೈಸ್ ಸ್ಪೈಸಿಯಾಗಿ ಇರಬೇಕಾ?...

Savi Ruchi - ಬಾಜ್ರಾ ಮಿಲ್ಲೆಟ್ ಬಳಸಿ ನೀವು ಯಾವ ಅಡುಗೆ ಪ್ಲಾನ್ ಮಾಡ್ತೀರಾ?

Savi Ruchi - ಬಾಜ್ರಾ ಮಿಲ್ಲೆಟ್ ಬಳಸಿ ನೀವು ಯಾವ ಅಡುಗೆ ಪ್ಲಾನ್ ಮಾಡ್ತೀರಾ?

Savi Ruchi - ಮುದ್ದೆ ಉಪ್ಸಾರು ಅಭಿಮಾನಿಗಳು ಯಾರಿದ್ದೀರಾ?

Savi Ruchi - ಮುದ್ದೆ ಉಪ್ಸಾರು ಅಭಿಮಾನಿಗಳು ಯಾರಿದ್ದೀರಾ?

Savi Ruchi - ನೀವೂ ಬೆಲ್ಲಿ ಫ್ಯಾಟ್ ಕರಗಿಸಬೇಕಾ? ಇಲ್ಲಿದೆ ಸುಲಭ ಉಪಾಯ!

Savi Ruchi - ನೀವೂ ಬೆಲ್ಲಿ ಫ್ಯಾಟ್ ಕರಗಿಸಬೇಕಾ? ಇಲ್ಲಿದೆ ಸುಲಭ ಉಪಾಯ!

ಕಾರ್ಯಕ್ರಮಗಳು

Bot

Follow Colors Kannada

Border Bottom Design

© Star India Pvt. Ltd. 2025